Image 1 Image 2

ICT integrated Digital Skills Program

ವಿದ್ಯಾರ್ಥಿಗಳು ದಿನ ನಿತ್ಯದ ಚಟುವಟಿಕೆಗಳಲ್ಲಿ ಸಮರ್ಥವಾಗಿ ವ್ಯವಹರಿಸಲು ಬೇಕಾದ ಡಿಜಿಟಲ್‌ ಸಾಮರ್ಥ್ಯಗಳನ್ನು ಮತ್ತು ಡಿಜಿಟಲ್‌ ಪ್ಲಾಟ್‌ ಫಾರ್ಮ್‌ಗಳನ್ನು ಜವಾಬ್ದಾರಿಯುತವಾಗಿ ಬಳಸಲು ಬೇಕಾದ ಕೌಶಲ್ಯಗಳನ್ನು ವೃದ್ದಿಸುವ ದೃಷ್ಟಿಯಿಂದ ರಾಜ್ಯದ ಎಲ್ಲಾ 4534 ಸರ್ಕಾರಿ ಪ್ರೌಢಶಾಲೆಗಳಲ್ಲಿ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ICT integrated Digital Skills ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ.
ಈ ಕಾರ್ಯಕ್ರಮದ ಪಠ್ಯಕ್ರಮವು ಸಿಐಇಟಿ (ಎನ್‌ ಸಿ ಇ ಆರ್‌ ಟಿ) ಯ ಐಸಿಟಿ ಪಠ್ಯಕ್ರಮ ಮತ್ತು ಕೌಶಲ್ಯ ಕಾರ್ಯಪಡೆ ಅಭಿವೃದ್ಧಿಪಡಿಸಿದ ಡಿಜಿಟಲ್ ಕೌಶಲ್ಯ ಪಠ್ಯಕ್ರಮವನ್ನು ಆಧರಿಸಿದೆ.
ಪಠ್ಯಕ್ರಮವು ಡಿಜಿಟಲ್ ಸಾಧನಗಳು, ಡಿಜಿಟಲ್ ಸಂವಹನ, ಸಾಮಾಜಿಕ ಮಾಧ್ಯಮ ಮತ್ತು ಆನ್ಲೈನ್ ಸುರಕ್ಷತೆ ಮುಂತಾದ ವಿಷಯಗಳೊಂದಿಗೆ, ಆಫೀ಼ಸ್, ಇಮೇಜ್, ಆಡಿಯೋ ಮತ್ತು ವೀಡಿಯೊ ಎಡಿಟಿಂಗ್‌, ಪ್ರೋಗ್ರಾಮಿಂಗ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸಲು ಅಗತ್ಯವಾದ ಕೌಶಲ್ಯಗಳನ್ನು ಒಳಗೊಂಡಿದೆ.

Image 1